ಮಲೆನಾಡಿನ ಮಳೆ ಹನಿಯಂತೆ ನನ್ನ ಮನಸ್ಸು!!! ತೇವದ ಹನಿಗಳ ನಡುವೆ ಅಕ್ಷರದ ಬೆಚ್ಚನೆಯ ಕಾವು ಸಿಗುವುದೆಂಬ ಎಂಬ ಮರೀಚಿಕೆ ಹುಡುಕಾಟ...
Saturday, March 14, 2009
ನೆಲೆ
ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ
ಮನೆ ಮನ ಬೆಳಗಿರಲು,
ಒಂಟಿತಾರೆ ದಿನಕರನ ಸಾಂಗತ್ಯವೇಕೆ?
ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ
ಜೀವಜಲವಾಗಿಹ ತುಂಗೆ ಇರಲು,
ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ
ಕಡಲ ಹಂಬಲವೇಕೆ?
ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ
ಇನಿದನಿ ಇಂಪಾಗಿರೆ,
ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?
ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು
ಕಾಣದೂರ ಹಂಗಿನರಮನೆಯ ವೈಭೋಗವೇಕೆ?
ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು
ಉಳಿದ ಕಾಮತೃಷೆಯೇಕೆ?
ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು
ಗೆಲುವು ಸೋಲು, ನೋವು ನಲಿವಿಗೆ
ಪಂಚಭೂತಗಳೇ ಸಾಕ್ಷಿಯಾಗಿರಲಿ
ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ
ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ
Labels:
life,
malenadu,
nirachitha,
ಜೀವನ ಪ್ರೀತಿ,
ನಿರಚಿತ,
ಮಲೆನಾಡು
Subscribe to:
Post Comments (Atom)
2 comments:
ಮಲೆನಾಡ ಮಗಳು ಮಲೆನಾಡ ಸವಿಯನ್ನು ಸವಿಯುತ್ತ ಅಲ್ಲೇ ಇರಲೆಂದು ಆಶಿಸುತ್ತೇನೆ.. ಕವನ ಅರ್ಥಪೂರ್ಣವಾಗಿದೆ ಇಷ್ಟವಾಗಿದೆ... ಹೀಗೆ ಬರೆಯುತ್ತಲಿರಿ
ಮಲೆನಾಡಿನ ಮಗಳ, ಮಲೆನಾಡಿನ ಕವನ ತುಂಬ ಚೆನ್ನಾಗಿ ಇದೆ.... ಎಷ್ಟು ಅಭಿಮಾನ ನಿಮ್ಮ ಮಲೆನಾಡ ಬಗ್ಗೆ..?
ಹೌದು ಮಲೆನಾಡಿನಲ್ಲಿ ಕಾಫಿ ತೋಟಗಳ ಮದ್ಯ ತೀರ್ಥಹಳ್ಳಿಯ ಸೊಬಗಿನ ನಡುವೆ ಇರುವುದೇ ಒಂದು ಆನಂದ.....
ತುಳಸೀವನ ಕ್ಕೆ ಬೇಟಿ ನೀಡಿದಾಗ ನಿಮ್ಮ ಬ್ಲಾಗ್ ಪರಿಚಯವಾಯಿತು.... ಚೆನ್ನಾಗಿ ಇದೆ ನಿಮ್ಮ ಬರಹಗಳು.. ಇನ್ನೊಮ್ಮೆ ಬಿಡುವು ಮಾಡಿಕೊಂಡು ನಿಮ್ಮ ಬರಹಗಳನು ನೋಡುತ್ತೇನೆ....
ಗುರು
Post a Comment